Friday, July 17, 2015

ರೈತರ ಪಾಲಿನ ಕಹಿ ಕಬ್ಬು

ಕಳೆದ ೫-೬ ತಿಂಗಳಿನಿಂದ ಎಲ್ಲ ಪತ್ರಿಕೆ, ವಾರ್ತಾ ಪ್ರಸಾರಗಳಲ್ಲಿ ವಿಷಾದದ ಸುದ್ದಿಎಂದರೆ 'ರೈತರ ಆತ್ಮಾಹುತಿ'. ಕಳೆದ ಒಂದು ದಶಕದಿಂದ ರೈತರಿಗೆ ಸಿಹಿಯಾಗಿ ಸಿಹಿಉನ್ನಿಸಿದ ಕಬ್ಬು ಈಗ ಕಹಿಯಾದ ವಿಷವಾಗಿದೆ. ಇದಕ್ಕೆ ನಿಖರವಾದ ಕಾರಣವನ್ನು ಕೊಡುವುದು ಕಷ್ಟಕರ. ರಾಜನಿತಿಕ, ಸಾಮಾಜಿಕ  ಹಾಗೂ ಭೌಗೋಳಿಕ ವೈಕಲ್ಪ್ಯಗಳಿಂದಾಗಿ ಕಬ್ಬಿನ  ಬೆಳೆ  ಮತ್ತು ಅದರ ದರದಲ್ಲಿ, ಪ್ರತಿ ವರ್ಷ ಏರು ಪೆರು ಕಾನಸಿಗುತ್ತಿದೆ. ಕಬ್ಬಿನ  ಬೆಳೆಯಲ್ಲಿರುವ ನಮ್ಯತೆಯಿಂದಾಗಿ  ರೈತರು ಬೇರೆ ಧಾನ್ಯ ಬೆಳೆಗನ್ನು ನಿರ್ಲಕ್ಷಿಸುವಂತಾಗಿದೆ. ಒಂದು ವರ್ಷ ನಾಟಿ ಮಾಡಿ ಮೂರು ವರ್ಷ ಬೆಳೆ  ತೆಗೆಯುವ ಸಾಮರ್ಥ್ಯದಿಂದಾಗಿ ಕಬ್ಬು ರೈತರನ್ನು ಆಕರ್ಶಿಷಿದೆ. ಸ್ವಲ್ಪ ಬಿರುಸಿನ ಬೆಳೆಯಾಗಿರುವುದರಿಂದ ಕಡಿಮೆ ಮಳೆ ಅಥವಾ ಹೆಚ್ಚು ಬಿಸಿಲನ್ನು ಅರಗಿಸುವ ಶಕ್ತಿ ಕಬ್ಬಿನದ್ದಾಗಿದೆ. ಅಕಾಲಿಕ ಮಳೆ, ಸಕ್ಕರೆ ಅಂಶವನ್ನು ಕಡಿಮೆ ಮಾಡಿತು, ಹೊರತು ಸಂಪೂರ್ಣ ಬೆಳೆಯನ್ನು  ನಾಶ ಮಾಡಲಿಕ್ಕಿಲ್ಲಾ . ಇಸ್ಟೆ ಅಲ್ಲದೆ, ಹೊಲದಲ್ಲಿ ಕೆಲಸ ಮಾಡುವವರ ಸಂಖೆ ಕೂಡಾ ಬಹಳ ಕಡಿಮೆ ಆಗಿದೆ. ಉತ್ತರ ಕರ್ನಾಟಕದ ರೈತರೊಬ್ಬರಿಗೆ ಸಂದರ್ಷಿಸಿ, ಅವರು ಕಬ್ಬನ್ನು  ಏಕೆ ಅವಲಂಬಿಸಿದ್ದಿರಿ ಎಂಬ ಪ್ರಶ್ನೆಗೆ ಉತ್ತರ್ವೇನೆಂದರೆ- "ಈತ್ತಿಚೆಗೆ ಹೊಲದಲ್ಲಿ ಕೆಲಸ ಮಾಡಲು ಕೆಲಸಗಾರರ ಕೊರತಇಂದ, ಪರ್ಯಾಯ ಬೆಳೆಗಳನ್ನು ಬೆಳೆಯಲಾಗದೆ, ನಾವು ಕಬ್ಬಿಗೆ ಅನುಸರಿಸಿಕೊಂಡಿದ್ದೇವೆ". ಹೀಗೆ ಬಹುಪಾಲು ರೈತರು ಧಾನ್ಯ ಬೆಳೆಗಳನ್ನು ಬಿಟ್ಟು ಬರಿ ಕಬ್ಬಿನ  ಹಿಂದೆ ಬಿದ್ದರ ಕಾರಣ ಮಾರುಕಟ್ಟೆಯಲ್ಲಿ ಕಬ್ಬಿನ  ಆವಾಹನ ವರ್ಷದಿಂದ ವರ್ಷಕ್ಕೆ  ಹೆಚ್ಚುತ್ತಿದೆ. ಇದರಿಂದ ಸಕ್ಕರೆಯ ಉತ್ತ್ಪಾದನೆ  ಹೆಚ್ಚಾಗಿ, ದರದಲ್ಲಿ ಇಳಿಮುಖವಾಗಿ, ರೈತರು ಸೇರಿದಂತೆ ಮಿಲ್ ಮಾಲಿಕರು ಪರದಾಡುವಂತಾಗಿದೆ.


ವೋಟಿಗಾಗಿ ಒಂದಾದ ಮೇಲೊಂದು ಸರ್ಕಾರಗಳು, ಕಬ್ಬಿನ ದರವನ್ನು ಏರಿಸುತ್ತ ಬಂದಿವೆ.  ಕಬ್ಬಿನ  ದರಕ್ಕೆ ಅನುವಾಗಿ ಸಕ್ಕರೆ ದರ ಮಾತ್ರ ಮೇಲೆದರದೆ ಮಾರುಕಟ್ಟೆಯಲ್ಲಿ ಉತ್ಪಾದನೆ ಮತ್ತು ಅವಶ್ಯಕತೆಯಲ್ಲಿ ವ್ಯತ್ತ್ಯಯಕ್ಕೆ ಕಾರಣವಾಗಿದೆ. 2002 ರಲ್ಲಿ ಕಬ್ಬಿನ ದರ  ರೂ . 70 ಪ್ರತಿ ಕ್ವಿಂಟಾಲ್ ಇಂದ 2015 ರಲ್ಲಿ ರೂ.  230 ಪ್ರತಿ ಕ್ವಿಂಟಾಲ್ ಗೆ  ಎರಿದೆ (228% ರಷ್ಟು  ವೃದ್ಧಿ) . ಇದೆ ಅವಧಿಯಲ್ಲಿ  ನಲ್ಲಿ ಸಕ್ಕರೆ ದರ ಮಾತ್ರ ರೂ . 12 ರಿಂದ ರೂ . 29 ಕ್ಕೆ ಏರಿದೆ (141% ರಷ್ಟು  ವೃದ್ಧಿ).  ಅವಶ್ಯಕತೆಗಿಂತ ಹೆಚ್ಚಿನ ಉತ್ಪಾದನೆ ಅಲ್ಲದೆ ವಿದೇಶಗಳಿಂದ ಸಕ್ಕರೆಯ ಆಮದಿನಿಂದಾಗಿ ಸಕ್ಕರೆಯ ದರವನ್ನು ನಿಯಂತ್ರಿಸುವುದರಲ್ಲಿ ಸರ್ಕಾರಗಳು ವಿಫಲವಾಗಿವೆ. 

ತಮ್ಮ ಈ ವೈಫ಼ಲ್ಲ್ಯತೆ ಯನ್ನು ಮುಚ್ಚಿ ಹಾಕಲು, ಪ್ರತಿ ವರ್ಷ ಸಾಲ ಮನ್ನಾ, ವಿಶೇಷ ಪ್ಯಾಕೆಜ್, ಮಡಿದವರಿಗೆ ಪರಿಹಾರ ಎಂದೆಲ್ಲಾ ಘೋಷಿಸಿ, ನೋವಿಗೆ ಮುಲಾಮು ಮಾಡಿದರೆ, ವಿನಹಾ ನೋವಿಗೆ ಕಾರಣವಾದ ರೋಗವನ್ನು ಹತ್ತಿಕ್ಕಲು ಯಾವ ಸರ್ಕಾರವು ಕಾರ್ಯಾನ್ವಿತವಾಗಲಿಲ್ಲ. ಇದೆ ಖರ್ಚನ್ನು ಸರ್ಕಾರ ರೈತರಲ್ಲಿ ವೈಜ್ಞಾನಿಕ  ಅರವು ಮುಡಿಸುವುದರಲ್ಲಿ ವ್ಯಾಪಕವಾಗಿ ಬಳಸಿದ್ದಲ್ಲಿ, ರೈತರ ಆತ್ಮಾಹುತಿಯನ್ನು ತಡೆಯಬಹುದಾಗಿತ್ತು. ಕೇಂದ್ರ ಹಾಗೂ  ರಾಜ್ಯ ಸರ್ಕಾರಗಳು, ರಾಷ್ಟ್ರಾದ್ಯಂತ ಗತವರ್ಷದ ಸ್ಟಾಕ್  ವಿವರಣೆ ಪಡೆದು, ಪ್ರತಿ ವರ್ಷ ನಾಟಿ ಸಮಯಕ್ಕೆ ಯಾವ ಬೆಳೆ  ಬೆಳೆದರೆ ಎಷ್ಟು ದರ ಪಡೆಯಬಹುದು ಎಂಬ ಮಾಹಿತಿಯನ್ನು ಮಾಹಿತಿ-ಮಾದ್ಯಮಗಳ ಮುಖಾಂತರ ಬಿತ್ತರಿಸಬೇಕು. ಹಳ್ಳಿಗಳಲ್ಲಿನ ಕೃಷಿ ಸೇವಾ ಕೇಂದ್ರಗಳನ್ನು ಮಾಹಿತಿ ಸಂಗ್ರಹಣೆಗಾಗಿ ಸಕ್ರಿಯವಾಗಿ ಉಪಯೋಗಿಸಿ, ರೈತರಿಗೆ ತಾತ್ಕಾಲಿಕ ಮಾಹಿತಿಯನ್ನು ಒದಗಿಸಿ, 7-15 ದಿನಕ್ಕೊಮ್ಮೆ ಮಾಹಿತಿಯನ್ನು ಪರಿಸ್ಕರಿಸಬೇಕು . ಇಂತಹ ಮಾಹಿತಿ ರೈತರ ಕೈ ಬೇರೆಳುಗಳಲ್ಲಿ ಸೇರಲು ಮೊಬೈಲ್ ಬಳಕೆಯಾಗುವಂತಾಗಬೇಕು. ಡಿಜಿಟಲ್ ಇಂಡಿಯಾ, ಎಂದರೆ ಇಂಟರ್ನೆಟ್ ಕನೆಕ್ಷನ್, ಫೆಸಬೂಕ್ , ಟ್ವಿಟರ್ ಗಳಿಗೆ ಸೀಮಿತವಾಗದೆ ಕೃಷಿ ಸಂದೆಶವಾಹಕವಾಗಬೇಕು. 
ವಿಧಾನ ಸಭೆ/ಪರಿಷತ್ ಸೇರಿದಾಗ, ಕಾಲ್ನಡಿಗೆ, ರೈತಪರ ಹೋರಾಟ ಎಂದೆಲ್ಲಾ ವಾಗ್ದಾಳಿ ಮಾಡುವ ವಿಪಕ್ಷಗಳು, ಆತ್ಮಾಹುತಿ ಗೈದ ರೈತರ ಮನೆಗೆ ಸಹಾನುಭೂತಿ ನೀಡಲು ತೆರಳುವ ರಾಜಕಾರಿಣಿಗಳು, ಕೃಷಿ  ಕ್ಷೇತ್ರಗಳಲ್ಲಿ ರೈತರಿಗೆ ಮಾಹಿತಿ , ಕೃಷಿ ಮೇಳಗಳನ್ನು ಹಮ್ಮಿಕೊಲ್ಲಬೆಕು.

ಎಲ್ಲದ್ದಕ್ಕೂ ಮೇಲಾಗಿ, ಸ್ವತಃ ರೈತನು ಜಾಗೃತನಾಗಬೇಕು. ಯಾವ ಬೆಳೆಯನ್ನು, ಯಾವಾಗ ಅವಲಂಬಿಸಿದರೆ, ತಾನು ಬದುಕಬಲ್ಲೆನು ಎಂಬುವ ತರ್ಕವನ್ನು ಮೈಗುಡಿಸಿಕೊಲ್ಲಬಲ್ಲವನಾಗಬೇಕು. ಕೃಷಿ ಎಂಬುದು ಒಂದು ಸಾಧಾರಣ ಕಸಬು ಮಾತ್ರವಲ್ಲದೆ, ಅನಾದಿ ಕಾಲದಿಂದಲೂ ವೈಜ್ಞಾನಿಕ ವಾಗಿ ವಿಕಸನಗೊಂಡ ಕಲೆಯಾಗಿದೆ. ಆದ ಕಾರಣ ಕೃಷಿಯನ್ನು ರಾಜಕೀಯ ದೃಷ್ಟಿಯಿಂದ ನೋಡದೆ ವೈಜ್ಞಾನಿಕ  ರೀತಿಯಿಂದ ಕಂಡು ಕಹಿಯಾದ ಕಬ್ಬನ್ನು ಸಿಹಿಗೊಳಿಸಬೇಕಾಗಿದೆ.

No comments: